ಶ್ರೀಕಾಂತ್ ಕಿಡಂಬಿ ಭಾರತದ ಬ್ಯಾಡ್ಮಿಂಟನ್ ಕ್ರೀಡಾಪಟು ಹಾಗೂ ಮಾರ್ಚ್ ೧೨, ೨೦೧೫ರ ವಿಶ್ವ ರ‍್ಯಾಂಕಿಗ್ ಪ್ರಾಕರ ೪ನೇ ಸ್ಥಾನದಲ್ಲಿರುವ ಇವರು ಸದ್ಯದಲ್ಲಿ ಭಾರತದ ಅಗ್ರಮಾನ್ಯ ಆಟಗಾರರಾಗಿದ್ದಾರೆ. ಇವರು ೨೦೧೪ರ ಚೀನಾ ಒಪನ್ ಸೂಪರ್ ಸೀರಿಸ್ ನ ಅಂತಿಮ ಪಂದ್ಯದಲ್ಲಿ ಲಿನ್ ಡ್ಯಾನ್ ರವರನ್ನು ಸೋಲಿಸುವ ಮೂಲಕ ಸೂಪರ್ ಸೀರಿಸ್ ಪುರಷರ ಪ್ರಶಸ್ತಿಯನ್ನು ಗೆದ್ದುಕೊಂಡ ಭಾರತದ ಮೊದಲ ಆಟಗಾರರಾದರು. ಇವರು ಪ್ರಸ್ತುತವಾಗಿ ಹೈದರಾಬಾದಿನ ಗೋಪಿಚಂದ್ ಬ್ಯಾಡ್ಮಿಂಟನ್ ಆಕಾಡೆಮಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ ಮತ್ತು ಬೆಂಗಳೂರಿನ ಗೊಸ್ಪೊರ್ಟ್ಸ್ ಫೌಂಢೇಶನ್ ರವರು ಇವರಿಗೆ ನೆರವಾಗಿದ್ದಾರೆ. == ವೈಯಕ್ತಿಕ ಜೀವನ == ಶ್ರೀಕಾಂತ್ ನಮ್ಮಲ್ವರ್ ಕಿಡಂಬಿಯವರು ಆಂದ್ರ ಪ್ರದೇಶದ ಗುಂಟೂರಿನಲ್ಲಿ ೭ ಫೆಬ್ರವರಿ ೧೯೯೩ರಲ್ಲಿ ಜನಿಸಿದರು. ಇವರ ತಂದೆ ಕೆವಿಎಸ್ ಕೃಷ್ಣ ರವರು ರೈತರಾಗಿದ್ದು, ಮತ್ತು ತಾಯಿ ರಾಧ ಮನೆಹೆಂಡತಿಯಾಗಿದ್ದರೆ. ಶ್ರೀಕಾಂತನ ತಮ್ಮ ನಂದಗೋಪಲನು ಸಹ ಒಬ್ಬ ಬ್ಯಾಡ್ಮಿಂಟನ್ ಆಟಗಾರ. == ವೃತ್ತಿ ಜೀವನ == === ೨೦೧೧ === ೨೦೧೧ರ ಯುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮಿಶ್ರ ಡಬಲ್ಸ್ ನಲ್ಲಿ ಬೆಳ್ಳಿ ಹಾಗೂ ಡಬಲ್ಸ್ ನಲ್ಲಿ ಕಂಚನ್ನು ಗೆದ್ದುಕೊಂಡರು. ಇವರು ಪೂಣೆಯಲ್ಲಿ ನೆಡೆದ ಅಖಿಲ ಭಾರತ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲೂ ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ವಿಜೇತರಾದರು. === ೨೦೧೨ === ೨೦೧೨ರಲ್ಲಿ ಶ್ರೀಕಾಂತ್ ರವರು ವಿಶ್ವ ಜೂನಿಯರ್ ಚಾಂಪಿಯನ್ ರಾದ ಮಲೇಷ್ಯಾದ ಜುಲ್ಫಾದಿ ಜುಲ್ಕಿಫ್ಲಿಯವರನ್ನು ಮಣಿಸಿ ಮಾಲ್ಡೀವೇಸ್ ಅಂತರಾಷ್ಟ್ರೀಯ ಸಿಂಗಲ್ಸ್ ಕಿರೀಟವನ್ನು ತಮ್ಮದಾಗಿಸಿಕೊಂಡರು. === ೨೦೧೩ === ಥೈಲ್ಯಾಂಡ್ ಒಪನ್ ಗ್ರ್ಯಾಂಡ್ ಪ್ರಿಕ್ಸ್ ಗೊಲ್ಡ್ ಪಂದ್ಯಾವಳಿಯಲ್ಲಿ, ಶ್ರಿಕಾಂತ್ ರವರು ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಆಗಿನ ವಿಶ್ವದ ೮ನೇ ಶ್ರೆಯಾಂಕದ ಬೂನ್ಸಕ್ ಪೊನ್ಸಾನರವರನ್ನು ನೇರ ಸೆಟ್ ಗಳಿಂದ ಸೋಲಿಸುವ ಮೂಲಕ ಗೆದ್ದುಕೊಂಡರು. === ೨೦೧೪ === ಚೀನಾ ಒಪನ್ ಸೂಪರ್ ಸೀರಿಸ್ ನ ಅಂತಿಮ ಪಂದ್ಯದಲ್ಲಿ ಲಿನ್ ಡ್ಯಾನ್ ರವರನ್ನು ಸೋಲಿಸುವ ಮೂಲಕ ಸೂಪರ್ ಸೀರಿಸ್ ಪುರಷರ ಪ್ರಶಸ್ತಿಯನ್ನು ಗೆದ್ದುಕೊಂಡ ಭಾರತದ ಮೊದಲ ಆಟಗಾರರಾಗಿ ಇತಿಹಾಸವನ್ನು ಸೃಷ್ಟಿಸಿದರು. == ೨೬-ಆಗಸ್ಟ್-೨೦೧೬ == ಕಿದಂಬಿ ಶ್ರೀಕಾಂತ್ ಅವರು 11 ರಿಂದ 10ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. == ಸಾಧನೆಗಳು == === ಸಿಂಗಲ್ಸ್ ಪ್ರಶಸ್ತಿಗಳು (೪) === ಗ್ರ್ಯಾಂಡ್ ಪ್ರಿಕ್ಸ್ ಪಂದ್ಯಾವಳಿ ಗ್ರ್ಯಾಂಡ್ ಪ್ರಿಕ್ಸ್ ಮತ್ತು ಗ್ರ್ಯಾಂಡ್ ಪ್ರಿಕ್ಸ್ ಗೊಲ್ಡ್ ಪಂದ್ಯಾವಳಿ ಸೂಪರ್ ಸೀರಿಸ್ ಪಂದ್ಯಾವಳಿ ಸೂಪರ್ ಸೀರಿಸ್ ಪ್ರಿಮಿಯರ್ ಪಂದ್ಯಾವಳಿ ಸೂಪರ್ ಸೀರಿಸ್ ಅಂತಿಮ ಪಂದ್ಯಾವಳಿ === ಉಪಾಂತ ವಿಜಯಿ (೨) === ಗ್ರ್ಯಾಂಡ್ ಪ್ರಿಕ್ಸ್ ಪಂದ್ಯಾವಳಿ ಗ್ರ್ಯಾಂಡ್ ಪ್ರಿಕ್ಸ್ ಮತ್ತು ಗ್ರ್ಯಾಂಡ್ ಪ್ರಿಕ್ಸ್ ಗೊಲ್ಡ್ ಪಂದ್ಯಾವಳಿ ಸೂಪರ್ ಸೀರಿಸ್ ಪಂದ್ಯಾವಳಿ ಸೂಪರ್ ಸೀರಿಸ್ ಪ್ರಿಮಿಯರ್ ಪಂದ್ಯಾವಳಿ ಸೂಪರ್ ಸೀರಿಸ್ ಅಂತಿಮ ಪಂದ್ಯಾವಳಿ == ==